ದೋಹ: ಭಾರತದ ವ್ಯಕ್ತಿಯ ನಿಗೂಢ ಸಾವು
ದೋಹ, ನವೆಂಬರ್ 1: ತೃಶೂರ್ ಚಮ್ಮನ್ನೂರ್ ಪುನ್ನಯೂರ್ಕುಳಂ ನಿವಾಸಿ ಅಶ್ರಫ್ ವಲಿಯೋಡತ್ (48) ದೋಹ ಸಮೀಪದಲ್ಲಿ ಕಟ್ಟಡವೊಂದರಲ್ಲಿ ನಿಗೂಢವಾಗಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ತಲೆಗೆ ಬಲವಾದ ಏಟು ಬಿದ್ದಿದ್ದು ಅದು ಸಾವಿಗೆ ಕಾರಣವೆಂದು ವರದಿಯಾಗಿದೆ. ಕಳೆದ ಹತ್ತುವರ್ಷಗಳಿಂದ ಕತರ್ನಲ್ಲಿ ಅವರು ಉದ್ಯೋಗದಲ್ಲಿದ್ದರು.
ಇಂದು ಬೆಳಗ್ಗೆ ಅವರ ನಿಧನ ಸುದ್ದಿ ಬಹಿರಂಗವಾಗಿದ್ದು, ಮಧ್ಯಾಹ್ನದ ವೇಳೆ ಅವರ ಮೃತದೇಹವನ್ನು ಆಸ್ಪತ್ರೆಯ ಕೊಂಡೊಯ್ದು ಮೋರ್ಚರಿಯಲ್ಲಿಡಲಾಗಿದೆ. ಅಶ್ರಫ್ರ ಸಾವಿಗೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಊರಿಕೊಂಡಯ್ಯಲು ಶ್ರಮ ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story