ಸೌದಿಅರೇಬಿಯ: ರಸ್ತೆ ಅಪಘಾತದಲ್ಲಿ ಭಾರತೀಯ ಸಾವು
ದಮ್ಮಾಂ,ಡಿ.22: ರಿಯಾದ್ ಸಮೀಪ ನಡೆದ ಅಪಘಾತವೊಂದರಲ್ಲಿ ಕೇರಳದ ತಾನೂರ್ ಪುತ್ತನ್ ತೆರು ಎಂಬಲ್ಲಿನ ಸಾದಿಕ್ ನಿಸಾರ್(28) ಮೃತಪಟ್ಟಿದ್ದಾರೆ. ರಿಯಾದ್ನಿಂದ ಹಫರುಲ್ ಬಾತ್ತಿನ್ ರಸ್ತೆಯಲ್ಲಿ ದಿಬಿಯ ಎಂಬಲ್ಲಿ ಸಾದಿಕ್ ಚಲಾಯಿಸುತ್ತಿದ್ದ ವಾಹನ ಟ್ರೈಲರ್ನ ಹಿಂಭಾಗಕ್ಕೆ ನುಗ್ಗಿ ನುಜ್ಜುಗುಜ್ಜಾಗಿತ್ತು .
ಒಂದು ವರ್ಷದ ಹಿಂದೆ ಮಾರ್ಬಲ್ ಕಂಪೆನಿಯಲ್ಲಿ ಚಾಲಕನಾಗಿ ಅವರು ಕೆಲಸಕ್ಕೆ ಸೇರಿದ್ದರು. ಹಫರುಲ್ ಬಾತ್ತಿನ್ ಸೆಂಟ್ರಲ್ ಆಸ್ಪತ್ರೆಯ ಶವಾಗಾರದಲ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಊರಿಗೆ ತರಲು ಅಗತ್ಯವಿರುವ ಕ್ರಮಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.
Next Story