ಒಮನ್ಗೆ ಬಂದಿಳಿದ ಗ್ವಾಂಟನಾಮೊ ಜೈಲಿನ ಹತ್ತುಮಂದಿ
ಮಸ್ಕತ್, ಜ.18: ಕ್ಯೂಬ ಗ್ವಾಂಟನಾಮೊ ಜೈಲಿನಿಂದ ಅಮೆರಿಕ ಬಿಡುಗಡೆಗೊಳಿಸಿದ ಹತ್ತು ಮಂದಿ ಒಮನ್ನಲ್ಲಿ ಬಂದಿಳಿದಿದ್ದಾರೆ. ಇವರಿಗೆ ತಾತ್ಕಾಲಿಕ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಒಮನ್ ವಿದೇಶ ಸಚಿವಾಲಯ ತಿಳಿಸಿದೆ.
ಅಮೆರಿಕ ಸರಕಾರದ ವಿಶೇಷ ಮನವಿಯ ಆಧಾರದಲ್ಲಿ ಗ್ವಾಂಟನಾಮೊದ ಕೈದಿಗಳನ್ನು ಸ್ವೀಕರಿಲು ಸುಲ್ತಾನ ಕಾಬೂಸ್ ಬಿನ್ ಸಈದ್ ಆದೇಶಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಇವರಿಗೆ ವಾಸ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವಾಲಯವನ್ನು ಉದ್ಧರಿಸಿ ಒಮನ್ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ ಕೈದಿಗಳು ಹೆಸರು ಅವರು ಯಾವದೇಶಕ್ಕೆ ಸಂಬಂಧಿಸಿದವರು ಎಂಬ ವಿವರವನ್ನು ಬಹಿರಂಗಪಡಿಸಲಾಗಿಲ್ಲ. ಒಬಾಮ ಅಧಿಕಾರದಿಂದ ಹೊರಹೋಗುವ ಮೊದಲು ಸಾಧ್ಯವಿರುವಷ್ಟು ಕೈದಿಗಳನ್ನು ಬಿಡುಗೊಳಿಸು ವ ಪ್ರಯತ್ನ ಸಾಗಿದೆ. ಇನ್ನು ಗ್ವಾಂಟನಾಮೊದಲ್ಲಿ ಕೇವಲ 45 ಕೈದಿಗಳು ಮಾತ್ರ ಉಳಿದಿದ್ದಾರೆಂದು ವರದಿ ತಿಳಿಸಿದೆ.
Next Story