ಒಮನ್: ಭಾರತೀಯ ಇಸ್ಲಾಮಿಕ್ ವಿದ್ವಾಂಸ ನಿಧನ
ಮೂರು ಭಾಷೆಗಳಲ್ಲಿ ಕುರ್ ಆನ್ ಅನುವಾದ ಮಾಡಿದ ವಿದ್ವಾಂಸ
ಮಸ್ಕತ್,ಜ.23: ಭಾರತದ ಇಸ್ಲಾಮೀ ವಿದ್ವಾಂಸ ಹಾಗೂ ಕುರ್ಆನ್ ವ್ಯಾಖ್ಯಾನಕಾರ ಡಾ. ಝಹರುಲ್ ಹಕ್ ಮಸ್ಕತ್ನಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೈದ್ಯರಾಗಿ ಅಮೆರಿಕ ಮತ್ತು ವಿಶ್ವಾರೋಗ್ಯ ಸಂಘಟನೆಯಲ್ಲಿಯೂ ಅವರು ಕೆಲಸ ಮಾಡಿದ್ದರು. ಪವಿತ್ರಕುರ್ಆನನ್ನು ಇಂಗ್ಲಿಷ್, ಬಂಗಾಳಿ, ಅಸ್ಸಾಮೀಸ್ ಭಾಷೆಗಳಿಗೂ ಅನುವಾದಿಸಿದ್ದಾರೆ. ಸುಲ್ತಾನ್ ಖಾಬೂಸ್ ಗ್ರ್ಯಾಂಡ್ ಮಸೀದಿಯಲ್ಲಿ ಪವಿತ್ರಕುರ್ಆನ್ ಕುರಿತು ಮತ್ತು ಇಸ್ಲಾಮೀ ವಿಷಯದಲ್ಲಿ ಹಲವಾರು ಉಪನ್ಯಾಸಗಳನ್ನು ಅವರು ನೀಡಿದ್ದಾರೆ.
ಅರಬಿಯಲ್ಲಿ ಗರಿಷ್ಠ ಅಂಕಗಳಿಸಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಡಾ.ಝಹರುಲ್ ಹಕ್ 1950ರಲ್ಲಿ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ವೇಳೆ ಇಸ್ಲಾಮೀ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡರು. 1972ರಲ್ಲಿ ಪವಿತ್ರಕುರ್ಆನ್ನ ಬಂಗಾಳಿ ಆವೃತ್ತಿಯ ಕೆಲಸದಲ್ಲಿ ತೊಡಗಿ 12 ವರ್ಷಗಳ ನಂತರ 1985ರಲ್ಲಿ ಅದನ್ನು ಪೂರ್ತಿಗೊಳಿಸಿದ್ದರು.
1991-93ರಲ್ಲಿ ಅಸ್ಸಾಮೀಸ್ ಭಾಷೆಯಲ್ಲಿ ಪವಿತ್ರಕುರ್ಆನ್ನ ಮೂರು ಅಧ್ಯಾಯಗಳನ್ನು ಅವರು ಪ್ರಕಟಿಸಿದರು. 2000ರಲ್ಲಿ ಅಮೆರಿಕದಲ್ಲಿ ಇಂಗ್ಲಿಷ್ ಭಾಷೆಯ ಅನುವಾದವನ್ನು ಪ್ರಕಟಿಸಿದರು. ಮೂರು ಭಾಷೆಗಳಲ್ಲಿ ಪವಿತ್ರಕುರ್ಅನ್ ಅನುವಾದ ಮಾಡಿರುವ ಏಕೈಕ ವ್ಯಕ್ತಿಯಾದ್ದರಿಂದ ಜಿದ್ದ ವಿಶ್ವವಿದ್ಯಾನಿಲಯದ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ. 2005ರಲ್ಲಿ ದಿವಾನ್ ಆಫ್ ರಾಯಲ್ ಕೋರ್ಟಿನ ಆಹ್ವಾನಿತರಾಗಿ ಉಪನ್ಯಾಸ ನೀಡಿದ್ದರು. ಪುತ್ರನೊಂದಿಗೆ ಒಮನ್ನಲ್ಲಿಅವರು ವಾಸವಿದ್ದರು. ಅಮಿರಾತ್ನಲ್ಲಿ ಅವರ ಪಾರ್ಥಿವ ದೇಹದ ದಫನ ಕಾರ್ಯ ನಡೆಯಿತೆಂದು ವರದಿ ತಿಳಿಸಿದೆ.