ಅಬುಧಾಬಿ : ವಾಹನಿಗರ ವಿರುದ್ಧದ ‘ಕಪ್ಪು ಅಂಕ’ಗಳು ರದ್ದು
ಅಬುಧಾಬಿ, ಮೇ 15: ನೂತನ ಸಾರಿಗೆ ನಿಯಮಗಳು ಮತ್ತು ದಂಡ ವಿಧಾನ ಜುಲೈ ಒಂದರಂದು ಜಾರಿಗೆ ಬರುವ ಮುನ್ನ, ಸಣ್ಣಪುಟ್ಟ ಸಾರಿಗೆ ನಿಯಮ ಉಲ್ಲಂಘನೆಗಳಿಗಾಗಿ ವಾಹನಿಗರ ವಿರುದ್ಧ ದಾಖಲಾಗಿರುವ ‘ಕಪ್ಪು ಅಂಕ’ಗಳನ್ನು ರದ್ದುಪಡಿಸುವ ಉಪಕ್ರಮವೊಂದನ್ನು ಅಬುಧಾಬಿ ಪೊಲೀಸರು ಆರಂಭಿಸಿದ್ದಾರೆ.
ಸಾರಿಗೆ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ವಿಧಾನಗಳು ಹಾಗೂ ನೂತನ ಸಾರಿಗೆ ಉಲ್ಲಂಘನೆಗಳು ಮತ್ತು ದಂಡಕ್ಕೆ ಸಂಬಂಧಿಸಿ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರ ಜುಲೈ ಒಂದರಂದು ಜಾರಿಗೆ ಬರಲಿದೆ.
ಅಬುಧಾಬಿ ರಸ್ತೆಗಳಲ್ಲಿ ಜುಲೈ ಒಂದರ ಮುನ್ನ ಸಣ್ಣಪುಟ್ಟ ಸಾರಿಗೆ ಉಲ್ಲಂಘನೆಗಳಿಗಾಗಿ ಚಾಲಕರ ವಿರುದ್ಧ ದಾಖಲಾಗಿರುವ ಕಪ್ಪು ಅಂಕಗಳನ್ನು ರದ್ದುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ರವಿವಾರ ತಿಳಿಸಿದರು.
Next Story