50 ಡಿಗ್ರಿ ಸೆಲ್ಸಿಯಸ್!: ಯುಎಇ ಕಾದ ಕಾವಲಿ
ದುಬೈ, ಜೂ.18: ಈ ಬಾರಿ ಯುಎಇಯ ವಾತಾವರಣ ಅಕ್ಷರಶಃ ಕಾದ ಕಾವಲಿಯಂತಾಗಿದ್ದು, ಶನಿವಾರ ಅಬುಧಾಬಿಯ ಲಿವಾ ಸಮೀಪದ ಮೆಝೈರಾದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ.
ರವಿವಾರ ತಾಪಮಾನ 34ರಿಂದ 37 ಸೆಲ್ಸಿಯಸ್ ವರೆಗೆ ಇರಲಿದೆ ಎಂದು ರಾಷ್ಟ್ರೀಯ ಮೆಟ್ರೋಪಾಲಜಿ ಹಾಗೂ ಭೂಕಂಪನಶಾಸ್ತ್ರ ಸಂಸ್ಥೆ ವರದಿ ನೀಡಿದೆ. ಇದೆಲ್ಲದರ ನಡುವೆ ತೇವಾಂಶ ಕೂಡ ಹೆಚ್ಚಿದ್ದು, ಕರಾವಳಿ ಭಾಗದಲ್ಲಿ 95 ಶೇ. ಹಾಗೂ ಒಳ ಪ್ರದೇಶಗಳಲ್ಲಿ 90 ಶೇ.ತಲುಪಲಿದೆ. ಇಡೀ ದಿವಸ ಬಿಸಿ ಹಾಗೂ ಮಸುಕಾದ ವಾತಾವರಣವಿರಲಿದೆ ಎಂದು ಎನ್ ಸಿಎಂಸ್ ಹೇಳಿದೆ. ರಾಷ್ಟ್ರದುದ್ದಕ್ಕೂ ದೂಳು ಹಾಗೂ ಮರಳು ತುಂಬಲಿರುವ ಸಾಧ್ಯತೆಯಿದೆ ಎನ್ನಲಾಗಿದೆ.
Next Story