ಯುಎಇ: ವಾಟ್ಸ್ಆ್ಯಪ್ ವೀಡಿಯೊ ಕರೆಗೆ ಮತ್ತೆ ತಡೆ
ಅಬುಧಾಬಿ (ಯುಎಇ), ಜೂ. 23: ತಡೆಹಿಡಿಯಲಾಗಿದ್ದ ಉಚಿತ ವಾಟ್ಸ್ಆ್ಯಪ್ ವೀಡಿಯೊ ಮತ್ತು ಧ್ವನಿ ಕರೆಗಳಿಗೆ ಗುರುವಾರ ಚಾಲನೆ ದೊರೆತಾಗ ಯುಎಇ ನಿವಾಸಿಗಳಿಗೆ ತಮ್ಮ ದೀರ್ಘಕಾಲೀನ ಕನಸೊಂದು ನನಸಾದ ಅನುಭವವಾಗಿತ್ತು!
ಆದರೆ, ಕನಸುಗಳು ಹೆಚ್ಚು ಸಮಯ ಬಾಳುವುದಿಲ್ಲವಲ್ಲ. ಅದೇ ರೀತಿ ವಾಟ್ಸ್ಆ್ಯಪ್ನ ಉಚಿತ ಕರೆಗಳೂ ಹೆಚ್ಚು ಸಮಯ ಬಾಳಲಿಲ್ಲ.
ದೇಶದ ವಾಯಿಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿಒಐಪಿ) ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ಯುಎಇಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್ಎ) ಸ್ಪಷ್ಟನೆ ನೀಡಿದೆ.
ಗುರುವಾರ ಜೀವಂತವಾಗಿದ್ದ ವಾಟ್ಸ್ಆ್ಯಪ್ ವೀಡಿಯೊ ಮತ್ತು ಧ್ವನಿ ಕರೆಗಳನ್ನು ಮತ್ತೆ ತಡೆಹಿಡಿಯಲಾಗಿದೆ.
Next Story