ದೋಹಾದಿಂದ ಯಾತ್ರಿಗಳನ್ನು ಕರೆತರಲು ಸೌದಿಯಿಂದ 7 ವಿಮಾನ
ರಿಯಾದ್, ಆ. 19: ಕತರ್ನ ಹಜ್ ಯಾತ್ರಿಗಳನ್ನು ದೋಹಾದಿಂದ ಜಿದ್ದಾದ ದೊರೆ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ತರಲು ಆಗಸ್ಟ್ 22ರಿಂದ 25ರವರೆಗೆ ಏಳು ವಿಮಾನಗಳನ್ನು ಸೌದಿ ಅರೇಬಿಯನ್ ಏರ್ಲೈನ್ಸ್ ಒದಗಿಸಿದೆ.
ಅದೇ ರೀತಿ ಹಜ್ ಯಾತ್ರೆ ಮುಗಿದ ಬಳಿಕ ಸೆಪ್ಟಂಬರ್ 5ರಂದು ಯಾತ್ರಿಗಳನ್ನು ಈ ವಿಮಾನಗಳು ವಾಪಸ್ ಕರೆದುಕೊಂಡು ಹೋಗುತ್ತವೆ.
‘‘ನಿರ್ದಿಷ್ಟ ವಿಮಾನಗಳನ್ನು ಹಾರಿಸಲು ಸೌದಿ ಅರೇಬಿಯನ್ ಏರ್ಲೈನ್ಸ್ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಕತರ್ ಅಧಿಕಾರಿಗಳಿಂದ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಸಿದೆ’’ ಎಂದು ಮಹಾ ನಾಗರಿಕ ವಾಯುಯಾನ ಪ್ರಾಧಿಕಾರ (ಜಿಎಸಿಎ)ದ ಮಹಾ ನಿರ್ದೇಶಕ ಮುಹಮ್ಮದ್ ಅಲ್-ಕತೈಬಿ ಹೇಳಿದರು.
ಕತರ್ ಅಧಿಕಾರಿಗಳಿಂದ ಈ ತನಕ ಅನುಮೋದನೆ ಲಭಿಸಿಲ್ಲ ಎಂದರು.
Next Story