ಸೌದಿ: ಮುಂದಿನ ವಾರದಿಂದ ವಾಟ್ಸ್ಆ್ಯಪ್ ವೀಡಿಯೊ ಕರೆ ಲಭ್ಯ
ರಿಯಾದ್, ಸೆ. 14: ವಾಟ್ಸ್ಆ್ಯಪ್, ಸ್ಕೈಪ್ ಮತ್ತು ಮತ್ತು ವೈಬರ್ ಮುಂತಾದ ಇಂಟರ್ನೆಟ್ ಧ್ವನಿ ಮತ್ತು ವೀಡಿಯೊ ಕರೆ ಆ್ಯಪ್ಗಳನ್ನು ಸೌದಿ ಅರೇಬಿಯದಲ್ಲಿ ಮುಂದಿನ ವಾರದಿಂದ ನಿರ್ಬಂಧಮುಕ್ತಗೊಳಿಸಲಾಗುವುದು ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಬ್ದುಲ್ಲಾ ಬಿನ್ ಅಮೀರ್ ಅಲ್-ಸವಾಹಹ್ ಹೇಳಿದ್ದಾರೆ.
ಈ ಆ್ಯಪ್ಗಳ ಮೂಲಕ ದೊರೆಯುವ ಧ್ವನಿ ಮತ್ತು ವೀಡಿಯೊ ಕರೆ ಸೌಲಭ್ಯಗಳು ಎಲ್ಲರಿಗೆ ದೊರೆಯುವಂತಾಗಲು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಆಯೋಗ ಹಾಗೂ ದೂರಸಂಪರ್ಕ ಸೇವಾ ಪೂರೈಕೆದಾರರ ನಡುವೆ ಮಾತುಕತೆ ನಡೆಯುತ್ತಿದೆ.
Next Story