Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆಳ್ವಾಸ್ ನುಡಿಸಿರಿಯ ಸಮ್ಮೇಳನದಲ್ಲಿ ಕಂಡು...

ಆಳ್ವಾಸ್ ನುಡಿಸಿರಿಯ ಸಮ್ಮೇಳನದಲ್ಲಿ ಕಂಡು ಬಂದ ಜನಸಾಮಾನ್ಯರ ಬಹುಮುಖಿ ಬದುಕು

ವಾರ್ತಾಭಾರತಿವಾರ್ತಾಭಾರತಿ2 Dec 2017 8:34 PM IST
share

ಮಂಗಳೂರು.ಡಿ. 2:ಆಳ್ವಾಸ್ ನುಡಿಸಿರಿಯ ಸಮ್ಮೇಳನದಲ್ಲಿ ನಾಡಿನ ವಿವಿಧ ಕಡೆಗಳಿಂದ ಕಂಡು ಬಂದ ಜನಸಾಮಾನ್ಯರು ಬದುಕು ಹಾಗೂ ತುಳುನಾಡಿನ ಬಹುಮುಖಿ ಬದುಕು ಬೇರೆ ಬೇರೆ ಕಡೆಗಳಲ್ಲಿ ಅನಾವರಣಗೊಂಡಿತು.

ಕೃಷಿ ಸಿರಿಯ ವಸ್ತು ಪ್ರದರ್ಶನದ ಪಕ್ಕದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆಸಲಾದ ತರಕಾರಿಗಳ ತೋಟ ನುಡಿಸಿರಿಗೆ ಬಂದ ಜನರನ್ನು ಆಕರ್ಷಿಸುತ್ತಿತ್ತು. ತೋಟದಲ್ಲಿ ಹೀರೆಕಾಯಿ, ಪಡುವಲ ಕಾಯಿ , ಹಾಗಲಕಾಯಿ ವಿವಿಧ ತಳಿಯ ಕುಂಬಳ ಕಾಯಿ, ಚೀನಿ ಕಾಯಿ ಮೀಟರ್ ಅಲಸಂಡೆ ಬದನೆ, ಸೌತೆ, ಬಾಳೆಕಾಯಿ ಜೊತೆಗೆ ತುಳುನಾಡಿನಲ್ಲಿ ಹಿತ್ತಲಲ್ಲಿ ಬೆಳೆಯುವ ಬಸಳೆ, ಮೆಣಸು,ಹರಿವೆ ಮೊದಲಾದ ತರಕಾರಿಗಳನ್ನು ಮೂರು ತಿಂಗಳ ಹಿಂದೆ ವಿದ್ಯಾಗಿರಿಯ ಗುಡ್ಡದಲ್ಲಿ ಸಮತಟ್ಟು ಮಾಡಿ ಸ್ಥಳೀಯ ಕೃಷಿಕೂಲಿಕಾರರ ಸಹಾಯದಿಂದ ಬೆಳೆಸಲಾಗಿತ್ತು. ಗುಡ್ಡದ ಪರಿಸರವಾದ ಕಾರಣ ಸ್ವಲ್ಪ ಬಿಸಿಲು ಹೆಚ್ಚಾಗಿದ್ದ ಕಾರಣ ಹಾಗೂ ಮಣ್ಣು ಇನ್ನೂ ಫಲವತ್ತಾಗಿದ್ದರೆ ಇನ್ನೂ ಚೆನ್ನಾಗಿ ತೋಟ ನಿರ್ಮಾಣವಾಗುತ್ತಿತ್ತು ಎಂದು ಬೆಳೆಗಾರರು ತಿಳಿಸಿದ್ದಾರೆ.

ಈ ನಡುವೆ ಕೃಷಿ ಕೆಲಸಕ್ಕೆ ಬೇಕಾದ ಸಲಕರಣೆಗಳಾದ ಕಬ್ಬಿಣದ ಸಲಕರಣೆ ತಯಾರಿಸುವ ಕುಶಲ ಕರ್ಮಿಗಳು ಕುಡುಗೋಲು,ಕಬ್ಬಿಣದ ಸಲಾಕೆ,ತಯಾರಿಸಿ ಮಾರಾಟ ಮಾಡುತ್ತಿದ್ದರು.ಕೃಷಿ ಮೇಳದಲ್ಲಿ ಹಲವಾರು ಕೃಷಿಕರು ತಮಗೆ ಬೇಕಾದ ಗಿಡಗಳನ್ನು, ತರಕಾರಿ ಬೀಜಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಇದೇ ಪರಿಸರದಲ್ಲಿ ಬುರುಡೆ ಜಂಗಮರು ಕಣಿ ಹೇಳುವುದರಲ್ಲಿ ಉತ್ತರ ಕರ್ನಾಟಕದ ಬೀದಿ ಬದಿಯ ಯಕ್ಷಿಣಿಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಜಾನಪದ ತಂಡದವರು ಸಮಾರಂಭದ ವೇದಿಕೆಯ ಹೊರಗು ತಮ್ಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಸಾಮಾನ್ಯರೊಂದಿಗೆ ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತುಳುನಾಡಿನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಕಾಣುವ ಗೂಡು ದೀಪಗಳು ಆಳ್ವಾಸ್ ನುಡಿ ಸಿರಿಯ ಸಭಾಂಗಣದಲ್ಲಿ ರಾರಾಜಿಸುತ್ತಿತ್ತು. 12 ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆ ಕುಸ್ತಿ ಪ್ರದರ್ಶನ ಕೋಣದ ಮೂಲಕ ತಿರುಗುವ ಕಬ್ಬಿಣ ಗಾಣದ ಯಂತ್ರ,ತೆಂಗಿನ ಕಾಯಿ ತುರಿಯುವ ಯಂತ್ರಗಳು ತುಳುನಾಡಿನ ದಿನ ಬಳಕೆಯ ಸಾಮಗ್ರಿಗಳ ಪ್ರರ್ಶನ ವಿಶೇಷ ಆಕರ್ಷಣೆಯಾಗಿತ್ತು.

ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬಾರ್ಕೂರು ಹುಬಾಶಿಕ ಕೊರಗರ ವೇದಿಕೆಯ ಡೋಲುವಾದನ,ಕುಣಿತ ಬುರ್ರಕಥಾ ಈರಮ್ಮನ ತಂಡದಿಂದ ಕಾರ್ಯಕ್ರಮ, ತುಳುನಾಡಿನ ಬೆದ್ರ ಫ್ರೆಂಡ್ಸ್ ತಂಡದ ಹುಲಿ ಕುಣಿತದ ಪ್ರದರ್ಶನ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಜನಪದ ಹಾಡುಗಾರರು ವೇದಿಕೆಯಲ್ಲಿ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸುತ್ತಿದ್ದರು.

ನುಡಿಸಿರಿಯಲ್ಲೂ ಸ್ವಚ್ಛತೆ ಜಾಗೃತಿ:- ನುಡಿ ಸಿರಿಯ ಆವರಣದಲ್ಲಿ ಮೂಡಬಿದ್ರೆ ಪುರಸಭೆಯ ವತಿಯಿಂದ ನಿರ್ಮಿಸಲಾದ ಸ್ಟಾಲ್ ಒಂದರಲ್ಲಿ ಜನರಿಗೆ ಮನೆಯ ತ್ಯಾಜ್ಯವನ್ನು ವಿಂಗಡಿಸಿ ಸಂಸ್ಕರಿಸುವ ಬಗ್ಗೆ ಜನರಿಗೆ ಕರಪತ್ರದೊಂದಿಗೆ ಮಾಹಿತಿ ನೀಡಲಾಗುತ್ತಿತ್ತು. ಜೊತೆಗೆ ಪೈಪ್ ಕಂಫೋಸ್ಟ್ ಮೂಲಕ ಜೈವಿಕ ಗೊಬ್ಬರ ತಯಾರಿಯ ಮಾಹಿತಿ ನೀಡಲಾಗುತ್ತಿತ್ತು.

ಕನ್ನಡ ನಾಡು ನುಡಿಯ ಹಬ್ಬದಲ್ಲಿ ತುಳು ಸಿರಿ:- ನುಡಿಸಿರಿಯಲ್ಲಿ ತುಳುನಾಡಿನ ತುಳು ಭಾಷೆಗೂ ಮನ್ನಣೆ ನೀಡುವ ಸಲುವಾಗಿ ತುಳು ಸಿರಿಯನ್ನು ಹಮ್ಮಿಕೊಳ್ಳಲಾಗಿತ್ತು. ತುಳು ಸಾಹಿತ್ಯ ಅಕಾಡಮಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರ ಪಾಲ್ಗೊಳ್ಳುವಿಕೆಯೊಂದಿಗೆ ತುಳು ಕಲಾವಿದರು ವಿವಿಧ ಕಾರ್ಯ ಕ್ರಮಗಳೊಂದಿಗೆ ತುಳುಸಿರಿ ನಾಡಹಬ್ಬದಲ್ಲಿ ಪಾತ್ರ ಪಡೆಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X