ಸುರತ್ಕಲ್: ವ್ಯಕ್ತಿ ಕಾಣೆ
ಮಂಗಳೂರು, ಡಿ.13:ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಕುಮಾರ್ (42) ಎಂಬವರು ಸೋಮವಾರದಿಂದ ಕಾಣೆಯಾಗಿದ್ದಾರೆ.
ಅಂದು ರಾತ್ರಿ 8ಗಂಟೆಗೆ ತನ್ನ ಮನೆಯಿಂದ ಸುರತ್ಕಲ್ನ ಹೊಟೇಲ್ಗೆ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ದೃಢಕಾಯ ಶರೀರದ ತಲೆಯ ಎದುರು ಭಾಗದಲ್ಲಿ ಅರೆ ಬೋಳು ಕೂದಲು ಹೊಂದಿರುವ ಇವರು ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಮರಾಠಿ ಭಾಷೆ ಮಾತನಾಡುತ್ತಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story