ಜ. 28: 'ಕುರ್ಆನ್ ಕಲಿಯಿರಿ' ಪಬ್ಲಿಕ್ ಪರೀಕ್ಷೆ
ಮಂಗಳೂರು, ಜ. 23: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ನ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಸಲಫಿ ಗರ್ಲ್ಸ್ ಮೂವ್ಮೆಂಟ್ ರಿಯಾದ್ ಇವುಗಳ ವತಿಯಿಂದ ಆಯೋಜಿಸಲಾದ ಕುರ್ಆನ್ ಅಧ್ಯಯನ ಮತ್ತು ಪರೀಕ್ಷಾ ಯೋಜನೆಯ ಅಂಗವಾಗಿ ಜ. 28 ರಂದು ಬೆಳಗ್ಗೆ 10 ಕ್ಕೆ ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಚೊಕ್ಕಬೆಟ್ಟು ಸಿರಾತೇ ಮುಸ್ತಕೀಮ್ ಮದ್ರಸದಲ್ಲಿ ಪವಿತ್ರ ಕುರ್ಆನಿನ ನೂಹ್, ಜಿನ್ನ್, ಮುಝಮ್ಮಿಲ್, ಮುದಸ್ಸಿರ್ ಮತ್ತು ಅಲ್ ಕಿಯಾಮಃ ಎಂಬ 5 ಅಧ್ಯಾಯಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರು ಮಸ್ಜಿದ್ ಇಬ್ರಾಹೀಂ ಖಲೀಲ್ನ ಬಳಿಯ ದಾರುಲ್ ಖೈರ್ ಮತ್ತು ಚೊಕ್ಕಬೆಟ್ಟು ಸಿರಾತೇ ಮುಸ್ತಕೀಮ್ ಮದ್ರಸದಲ್ಲಿ ಹೆಸರು ನೋಂದಾಯಿಸಿ ಹಾಲ್ ಟಿಕೇಟ್ ಪಡೆಯಬೇಕೆಂದು ಸಲಫಿ ವಿದ್ಯಾಭ್ಯಾಸ ಬೋರ್ಡ್ನ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. (ಅಬೂ ಬಿಲಾಲ್ : 7204705686)
Next Story