ಬಿ.ಸಿ.ರೋಡ್: ತಲಪಾಡಿಯ ಮೈದಾನದಲ್ಲಿ ಹಠಾತ್ ಬೆಂಕಿ
ಬಂಟ್ವಾಳ, ಫೆ.4: ಬಿ.ಸಿ.ರೋಡ್ ಬಿ.ಮೂಡ ಗ್ರಾಮದ ತಲಪಾಡಿಯ ಮೈದಾನದಲ್ಲಿ ರವಿವಾರ ಬೆಳಗ್ಗೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಒಳರಸ್ತೆಯ ತಲಪಾಡಿಯ ಮೈದಾನದಲ್ಲಿ ಒಣಹುಲ್ಲುಗಳಿಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಗುಡ್ಡೆಯನ್ನು ಆವರಿಸಿಕೊಂಡಿತ್ತು. ಸುಮಾರು ಎರಡು ಎಕರೆ ಪ್ರದೇಶ ಸಹಿತ ಕೆಇಬಿ ಉಪ ಘಟಕದ ಹಿಂಭಾಗದ ಗುಡ್ಡೆಯಲ್ಲಿ ಬೆಂಕಿ ವ್ಯಾಪಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳೀಯರು ಸಹಕರಿಸಿದರು.
Next Story