ಕ್ಯಾಲಿಕಟ್ ನಲ್ಲಿ ಸ್ವಿಫ್ಟ್ ಕಾರು - ಟೆಂಪೊ ಟ್ರಾವೆಲ್ಲರ್ ನಡುವೆ ಢಿಕ್ಕಿ: ಬೆಳ್ಳಾರೆಯ ಆರು ಮಂದಿಗೆ ಗಾಯ
ಸುಳ್ಯ, ಎ. 9: ಸ್ವಿಫ್ಟ್ ಕಾರು ಹಾಗೂ ಟೆಂಪೊ ಟ್ರಾವೆಲ್ಲರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಆರು ಮಂದಿ ಯುವಕರು ಗಾಯಗೊಂಡ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ಸೋಮವಾರದಂದು ನಡೆದಿದೆ.
ಘಟನೆಯಲ್ಲಿ ಬೆಳ್ಳಾರೆ ನಿವಾಸಿಗಳಾದ ಸಾಬಿತ್, ಜಾಬಿರ್, ಕಬೀರ್, ಅಲಿ, ಆಶಿಕ್ ಹಾಗೂ ಸಫ್ವಾನ್ ಗಂಭೀರವಾಗಿ ಗಾಯಗೊಂಡಿದ್ದು, ಕ್ಯಾಲಿಕಟ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬೆಳ್ಳಾರೆಯ ಯುವಕರು ಕಾರಿನಲ್ಲಿ ತೆರಳುತ್ತಿದ್ದಾಗ ಕ್ಯಾಲಿಕಟ್ ಸಮೀಪ ಟೆಂಪೊ ಟ್ರಾವೆಲ್ಲರ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story