ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಹಬೀಬ್
ಅಡ್ಡೂರು,ಎ.17: ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಇಲ್ಲಿನ ಫೈವ್ ಸ್ಟಾರ್ ಕ್ರೀಡಾಂಗಣದಲ್ಲಿ ನಡೆಯಿತು.ಸಭೆಯಲ್ಲಿ 2018-2019ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ, ಗೌರವಾಧ್ಯಕ್ಷರಾಗಿ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹಿಂ, ಉಪಾಧ್ಯಕ್ಷರಾಗಿ ಅಲ್ತಾಫ್ ಗರಡಿ, ಕಾರ್ಯದರ್ಶಿಯಾಗಿ ಅನ್ಸಾರ್, ಜತೆ ಕಾರ್ಯದರ್ಶಿಯಾಗಿ ತಮೀಮ್, ಖಾತೆ ನಿರ್ವಾಹಕರಾಗಿ ಅಬ್ದುಲ್ ಝಿಯಾನ್ ಹಾಗೂ ಸಲಹೆಗಾರರಾಗಿ ಇಲ್ಯಾಸ್ ಅವರನ್ನು ನೇಮಕಗೊಳಿಸಲಾಯಿತು.
Next Story