ಬೈಕಂಪಾಡಿ: ನೆರೆ ಸಂತ್ರಸ್ತರಿಗೆ ಇಪ್ತಾರ್ ವ್ಯವಸ್ಥೆ
ಬೈಕಂಪಾಡಿ, ಮೇ 29: ಇಂದು ಸುರಿದ ತೀವ್ರ ಮಳೆಗೆ ಬೈಕಂಪಾಡಿ, ಅಂಗರಗುಂಡಿಯ ಕೆಳ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ನಾಗರಿಕರು ತೀವ್ರ ಸಂಕಷ್ಟಕ್ಕೀಡಾದರು.
ರಮಝಾನ್ ಉಪವಾಸ ನಿರತ ಇಲ್ಲಿನ ನಿವಾಸಿಗಳ ಮನೆಯ ಎಲ್ಲಾ ದಿನಸಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋದವು. ಈ ಹಿನ್ನೆಲೆಯಲ್ಲಿ ನೆರವಿಗೆ ಧಾವಿಸಿದ ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿ ಕಮಿಟಿಯು, ನೆರೆ ಸಂತ್ರಸ್ತ ಎಲ್ಲಾ ಕುಟುಂಬಗಳಿಗೆ ಇಂದಿನ ಇಪ್ತಾರ್ ವ್ಯವಸ್ಥೆಯನ್ನು ಹಾಗೂ ರಾತ್ರಿ ಊಟವನ್ನು ತಯಾರಿಸಿ, ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ನೀಡಿತು. ಸ್ಥಳೀಯ ಯುವಕರು ಸಂತ್ರಸ್ತರಿಗೆ ನೆರವು ನೀಡಿದರು.
Next Story