ಮಂಗಳೂರು: ನಿರ್ಮಾಣ ಹಂತದ ಪೊಲೀಸ್ ವಸತಿಗೃಹದಿಂದ ಬಿದ್ದು ಮಹಿಳೆ ಮೃತ್ಯು
ಮಂಗಳೂರು, ಜೂ.1: ನಗರದ ಪಾಂಡೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ವಸತಿಗೃಹದ ಕಟ್ಟಡದಿಂದ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತ ಮಹಿಳೆಯನ್ನು ಗದಗ ಜಿಲ್ಲೆಯ ಚಿನ್ನಮ್ಮ ಎಂದು ಗುರುತಿಸಲಾಗಿದೆ. ಚಿನ್ನಮ್ಮ ಕಟ್ಟಡದಲ್ಲಿ ಕೂಲಿ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದು, ನಾಲ್ಕನೇ ಮಹಡಿಯಲ್ಲಿ ನಿಂತು ಕಟ್ಟಡಕ್ಕೆ ನೀರು ಹಾಯಿಸುತ್ತಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story