ಜು. 2: ಆಯಿಷಾ ಪ್ರಾಥಮಿಕ ಶಾಲೆ ಉದ್ಘಾಟನೆ, ‘ಶಾಲಾ ಪ್ರಾರಂಭೋತ್ಸವ’
ಆತೂರು, ಜೂ. 28: ಆಯಿಷಾ ಪ್ರಾಥಮಿಕ ಶಾಲೆ ಮತ್ತು ಆಯಿಷಾ ಪೂರ್ವ ಪ್ರಾಥಮಿಕ ಶಾಲೆ ಇದರ ಉದ್ಘಾಟನೆ ಮತ್ತು ಶಾಲಾ ಪ್ರಾರಂಭೋತ್ಸವವು ಜು. 2ರಂದು ಬೆಳಗ್ಗೆ 10 ಗಂಟೆಗೆ ಶಾಲಾ ವಠಾರದಲ್ಲಿ ನಡೆಯಲಿದೆ.
ಆಯಿಷಾ ವಿದ್ಯಾ ಸಂಸ್ಥೆಯ ಅಧ್ಯಕ್ಷ, ವೈಎಂಸಿಯ ಹಿರಿಯ ಪ್ರೊಫೆಸರ್ ಡಾ. ಅಬ್ದುಲ್ ಮಜೀದ್ ಉದ್ಘಾಟಿಸಲಿದ್ದಾರೆ.
ಕಾರವಳಿ ಕಾಲೇಜಿನ ಪ್ರೊಫೆಸರ್ ಮುಹಮ್ಮದ್ ಮುಬೀನ್, ಉದ್ಯಮಿ ಡಿ.ಎ. ಅಶ್ರಫ್ ಆತೂರ್, ಪ್ರಶಾಂತ್ ಆರ್.ಕೆ., ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ ಇದರ ಪ್ರಾಂಶುಪಾಲೆ ಶಂಸಾದ್ ಜಲೀಲ್, ಮೇರಿ ಜೋನ್ ಟೀಚರ್ ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story