ಕಾಮನ್ವೆಲ್ತ್ ಚೆಸ್ನಲ್ಲಿ ಲೂರ್ಡ್ಸ್ ಸೆಂಟ್ರಲ್ ಶಾಲಾ ವಿದ್ಯಾರ್ಥಿನಿ ಸಾಧನೆ
ಮಂಗಳೂರು, ಜು.5: ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ರಾಷ್ಟ್ರಗಳ ಚೆಸ್ ಪಂದ್ಯದಲ್ಲಿ ನಗರದ ಲೂರ್ಡ್ಸ್ ಸೆಂಟ್ರಲ್ ಶಾಲಾ ವಿದ್ಯಾರ್ಥಿನಿ ಎಸ್. ಮಲ್ಯ ಬಾಲಕಿಯರ 8ರ ವಯೋಮಾನದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ವಿಶಿಷ್ಟ ಸಾಧನೆಗೈದಿರುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಈ ಪಂದ್ಯದಲ್ಲಿ ಕಾಮನ್ ವೆಲ್ತ್ ರಾಷ್ಟ್ರಗಳನ್ನು ಒಳಗೊಂಡ 11 ದೇಶದ ಸ್ಪರ್ಧಿಗಳು ಭಾಗವಹಿಸಿದ್ದರು.
Next Story