ಹೋರಿಕರು ಕಳವು; ದೂರು
ಮಂಗಳೂರು, ಜು.21: ತಾಲೂಕಿನ ಕೊಳಂಬೆ ಗ್ರಾಮದ ಅಬ್ದುಲ್ ರಝಾಕ್ ಮನೆಯ ಹಿಂಬದಿಯ ಜಾಗದಲ್ಲಿ ಕಟ್ಟಿದ್ದ ಹೋರಿಕರು ಕಳವಾದ ಘಟನೆ ಶನಿವಾರ ನಡೆದಿದೆ. ಹೋರಿಕರುವಿನ ಬೆಲೆ 9 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಹೋರಿಕರು ಶುಕ್ರವಾರ ರಾತ್ರಿ 9:30ರಿಂದ ಶನಿವಾರ ಬೆಳಗ್ಗೆ 5:30ರೊಳಗೆ ಕಳವಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಳವಾದ ಹೋರಿಯು ಬೂದು ಬಣ್ಣದಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Next Story