ಅಕ್ರಮ ಜಾನುವಾರು ಸಾಗಾಟ: ಮೂವರ ಸೆರೆ
ಕೋಟ, ಆ.19: ಮಹೇಂದ್ರ ಪಿಕಪ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಕೋಟ ಪೊಲೀಸರು ತೆಕ್ಕಟ್ಟೆ ಗ್ರೇಸ್ ಹಾಲ್ ಬಳಿ ಆ.19ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.
ಚಾಲಕ ಶರತ್, ನಾಗೇಶ್ ಬಿ ಮತ್ತು ಅಣ್ಣಪ್ಪಬಂಧಿತ ಆರೋಪಿಗಳು. ಆರೋಪಿಗಳು ಜಾನುವಾರುಗಳನ್ನು ಮಾಂಸಕ್ಕಾಗಿ ಶಿವಮೊಗ್ಗಕ್ಕೆ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.
ಬಂಧಿತರಿಂದ ನಾಲ್ಕು ಮೊಬೈಲ್, 65ಸಾವಿರ ರೂ. ನಗದು, 15,500ರೂ. ಮೌಲ್ಯದ ಎರಡು ಜಾನುವಾರು, 2,00,000 ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story