ರೋಟರಿ ಟೌನ್ ವತಿಯಿಂದ ಫೆಲೋಶಿಪ್ ಮೀಟ್-2018
ಬಂಟ್ವಾಳ, ಆ. 29: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಬುಧವಾರ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಉಮೇಶ್ ನಿರ್ಮಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ಸದಸ್ಯ ಸುರೇಶ್ ಸಾಲಿಯಾನ್ ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಕಾರ್ಯದರ್ಶಿ ಜಯರಾಜ್ ಎಸ್. ಬಂಗೇರ, ಪದಾಧಿಕಾರಿಗಳಾದ ಸುಧಾಕರ್ ಸಾಲಿಯಾನ್, ನಾರಾಯಣ ಪೆರ್ನೆ, ಸುರೇಶ್ ಬಿ., ದಯಾನಂದ ರೈ ಉಪಸ್ಥಿತರಿದ್ದರು.
Next Story