ಸೆ.10ರಿಂದ ಬಿಎಡ್ ದಾಖಲಾತಿ ಪ್ರಕ್ರಿಯೆ
ಮಂಗಳೂರು, ಸೆ.8: ಪ್ರಸಕ್ತ ಸಾಲಿನ ಬಿಎಡ್ ಪ್ರವೇಶಕ್ಕಾಗಿ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮತ್ತು ಸ್ಥಳ ಹಂಚಿಕೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಅಭ್ಯರ್ಥಿಗಳ ಮೊಬೈಲ್ಗೆ ಸಂದೇಶವನ್ನೂ ರವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಸೆ.10,11,14,15ರಂದು ನಡೆಯಲಿರುವ ದಾಖಲಾತಿ ಪ್ರಕ್ರಿಯೆಗೆ ವ್ಯವಸ್ಥಾಪಕ ಕೇಂದ್ರವಾದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಹಂಪನಕಟ್ಟೆ ಮಂಗಳೂರು ಇಲ್ಲಿಗೆ ಹಾಜರಾಗುವಂತೆ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story