ಗುಡ್ಡಗಾಡು ಓಟ: ಬೀನಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಥಮ
ಉಡುಪಿ, ಸೆ. 23: ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ದಾಂಡೇಲಿ ಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಅಂತರ್ ಮಹಾವಿದ್ಯಾಲಯದ ಗುಡ್ಡಗಾಡು ಓಟದಲ್ಲಿ ಬೀನಾ ವೈದ್ಯ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಬಿ.ಕಾಂ. ವಿದ್ಯಾರ್ಥಿನಿಯಾದ ಮೋಹಿನಿ ನಾಯ್ಕ ಸತತ ಮೂರನೇ ಬಾರಿಗೆ ಯುನಿವರ್ಸಿಟಿ ಬ್ಲೂ ಆಗಿರುತ್ತಾರೆ.
ಇವರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಮಂಕಾಳ ಎಸ್ ವೈದ್ಯ, ನಿರ್ದೇಶಕಿ ಪುಷ್ಪಲತಾ ಎಮ್.ಎಸ್, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರಸಾದ್ ಮಹಾಲೆ, ಉಪಪ್ರಾಂಶುಪಾಲರಾದ ಮಹೇಶ ಹೆಗ್ಡೆ, ದೈಹಿಕ ಶಿಕ್ಷಕರಾದ ಕೃಷ್ಣಪ್ಪ ನಾಯ್ಕ ಹಾಗೂ ಉಪನ್ಯಾಸಕ ವೃಂದವು ಅಭಿನಂದನೆ ಸಲ್ಲಿಸಿದ್ದಾರೆ.
Next Story