ಎ.6ರಂದು ಮಾರೂರು ಶಾಲೆಯಲ್ಲಿ ಸಮಾಗಮ ಸಭೆ
ಮೂಡುಬಿದಿರೆ, ಎ.2: ಶತಮಾನೋತ್ತರ ಸಮಾರಂಭವನ್ನು ಆಚರಿಸಿಕೊಳ್ಳುತ್ತಿರುವ ಮೂಡುಬಿದಿರೆ ಸಮೀಪದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಮಾರೂರು-ಹೊಸಂಗಡಿ ಇದರ ಹಳೆ ವಿದ್ಯಾರ್ಥಿಗಳ ಸಮಾಗಮ ಸಭೆಯು ಎ.6ರಂದು ಬೆಳಗ್ಗೆ ಗಂ. 10ಕ್ಕೆ ನಡೆಯಲಿದೆ ಎಂದು ಶಾಲೆಯ ನಿವೃತ್ತ ಅಧ್ಯಾಪಕ ನಾಗರಾಜ ಇಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಶಾಂತ್ ಕೋಟ್ಯಾನ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲೋಕಯ್ಯ ಎನ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Next Story