ಅ.15: ಪಡೀಲ್ ನಲ್ಲಿ ಸಖಾಫೀಸ್ ಜಲ್ಸಃ
ಮಂಗಳೂರು, ಅ. 13: ಕರ್ನಾಟಕ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಸಮಿತಿ ಆಶ್ರಯದಲ್ಲಿ ಸಖಾಫೀಸ್ ಜಲ್ಸಃ ಕಾರ್ಯಕ್ರಮ ಅ. 15ರಂದು ಬೆಳಗ್ಗೆ 11 ಗಂಟೆಗೆ ಪಡೀಲ್ ನ ಇಲ್ಮ್ ಸೆಂಟರ್ ನಲ್ಲಿ ನಡೆಯಲಿದೆ. ತಾಲೂಕು ಸಖಾಫೀಸ್ ಸಮಿತಿಯ ಅಧ್ಯಕ್ಷ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ, ಎಮ್ಮೆಸ್ಸೆಂ ಝೈನಿ ಕಾಮಿಲ್ ತಲಪಾಡಿ, ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯಃ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಮಹಬೂಬ್ ಸಖಾಫಿ ಕಿನ್ಯ ತಿಳಿಸಿದ್ದಾರೆ.
Next Story