ಪುತ್ತೂರು : ಮಕ್ಕಳೊಂದಿಗೆ ಮಹಿಳೆ ನಾಪತ್ತೆ; ದೂರು
ಪುತ್ತೂರು, ಅ. 16: ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವುದಾಗಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ನಿವಾಸಿಯೊಬ್ಬರು ಪುತ್ತೂರು ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಖಲಂದರ್ ಶಮೀರ್ ಎಂಬವರ ಪತ್ನಿ ಫಾತಿಮಾ (30) ಅವರು ಮಕ್ಕಳಾದ ಶಹಲಾ ಫಾತಿಮಾ (6) ಮತ್ತು ಮಹಮ್ಮದ್ ಸಾಯಿದ್ (3 ತಿಂಗಳು)ನೊಂದಿಗೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿ ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಫಾತಿಮಾ ಅವರು ತನ್ನ ಮಕ್ಕಳಿಬ್ಬರ ಜತೆ ರಾತ್ರಿ 3 ಗಂಟೆಯ ವೇಳೆಗೆ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಡಿದರೂ ಫಲಕಾರಿಯಾಗದ ಹಿನ್ನಲೆಯಲ್ಲಿ ಪತಿ ಖಲಂದರ್ ಶಮೀರ್ ದೂರು ನೀಡಿದ್ದಾರೆ.
Next Story