ಮಂಗಳೂರು: ಯುವಕ ನಾಪತ್ತೆ
ಮಂಗಳೂರು, ಅ.17: ಬಿಜೈನ ಅಪಾರ್ಟ್ಮೆಂಟ್ವೊಂದರ ಫ್ಲಾಟ್ನಿಂದ ವಿನಾಯಕ (19) ಎಂಬವರು ಅ.8ರಂದು ಸಂಜೆ 5:30ಕ್ಕೆ ಹೊರಹೋದವರು ವಾಪಸಾಗದೇ ನಾಪತ್ತೆಯಾಗಿದ್ದಾರೆ.
ಚಹರೆ: ನಾಪತ್ತೆಯಾದ ವಿನಾಯಕ 173 ಸೆಂ.ಮೀ. ಎತ್ತರವಿದ್ದು, ಸಾದಾ ಕಪ್ಪು ಕೂದಲು, ಬಿಳಿ ಮೈಬಣ್ಣ, ಉದ್ದ ಮುಖ ಹೊಂದಿದ್ದ. ಕೆಂಪು ಕಪ್ಪು ಗೆರೆಗಳಿರುವ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತುಳು ಭಾಷೆಗಳನ್ನು ಮಾತನಾಡುತ್ತಾರೆ.
ನಾಪತ್ತೆಯಾದ ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಉರ್ವ ಪೊಲೀಸ್ ಠಾಣೆ (0824- 2220521/ 2220801)ಗೆ ತಿಳಿಸಲು ಪ್ರಕಟನೆ ತಿಳಿಸಿದೆ.
Next Story