ಎಸ್ಸೆಸ್ಸೆಫ್ ಪದ್ಮುಂಜ ಶಾಖೆ ವತಿಯಿಂದ ಯುನಿಟ್ ಕಾನ್ಫರೆನ್ಸ್, ಫ್ಯಾಮಿಲಿ ಮೀಟ್
ಪದ್ಮುಂಜ, ಅ. 25: ಎಸ್ಸೆಸ್ಸೆಫ್ ಪದ್ಮುಂಜ ಶಾಖೆಯ ಯುನಿಟ್ ಸಮ್ಮೇಳನ ಮತ್ತು ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಖಲಂದರ್ ಷಾ ಜುಮಾ ಮಸೀದಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಪದ್ಮುಂಜ ಶಾಖಾ ಅಧ್ಯಕ್ಷ ಅಶ್ರಫ್ ಅಂತರ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಕಾರ್ಯದರ್ಶಿ ನಿಝಾಂ ಅತಿಥಿಗಳನ್ನು ಸ್ವಾಗತಿಸಿದರು. ಎಸ್ ವೈ ಎಸ್ ರಾಜ್ಯ ಸದಸ್ಯ ಖಾಸಿಂ ಪದ್ಮುಂಜ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಖಲಂದರ್ ಷಾ ಜುಮಾ ಮಸೀದಿಯ ಖತೀಬ್ ಮಸ್ಊದ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಖಲಂದರ್ ಪದ್ಮುಂಜ ತರಗತಿ ನಡೆಸಿದರು. ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣವನ್ನು ನಡೆಸಿದರು.
ವೇದಿಕೆಯಲ್ಲಿ ಖಲಂದರ್ ಷಾ ಜುಮಾ ಮಸೀದಿಯ ಮುಅದ್ಸಿನ್ ಉಸ್ತಾದ್ ಸಅದ್ ಹಿಮಮಿ, ಖಲಂದ್ ಷಾ ಜುಮಾ ಮಸೀದಿ ಕಾರ್ಯದರ್ಶಿ ಯೂಸುಫ್ ಅಂತರ, ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷ ಫಾರೂಕ್ ಸಅದಿ, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪದ್ಮುಂಜ, ಎಸ್ ವೈಎಸ್ ಪದ್ಮುಂಜ ಬ್ರಾಂಚ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಸುಲೈಮಾನ್ ಪದ್ಮುಂಜ ಉಪಸ್ಥಿತರಿದ್ದರು.