ಕೊಲ್ಲೂರು, ನ.11: ಕೊಲ್ಲೂರು ಮಾರಿಗುಡಿ ಸಮೀಪ ರಸ್ತೆ ಬದಿಯಲ್ಲಿ ನ.11ರಂದು ಬೆಳಗ್ಗೆ ನಿಲ್ಲಿಸಿದ್ದ ಕೊಲ್ಲೂರು ದಳಿ ನಿವಾಸಿ ರಾಜೇಶ್ ನಾಯ್ಕ ಎಂಬವರ 40 ಸಾವಿರ ರೂ. ವೌಲ್ಯದ ಕೆಎ 20 ಇಜಿ 2050 ನೇ ನಂಬರಿನ ಕಪ್ಪುಬಣ್ಣದ ಪಲ್ಸರ್ ಬೈಕ್ ಕಳವಾಗಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.