ಉಡುಪಿ: ಫ್ಲಾಟ್ಗೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಆಭರಣ ಕಳವು
ಉಡುಪಿ, ನ.13: ಕುಂಜಿಬೆಟ್ಟುವಿನಲ್ಲಿರುವ ಹರ್ಷವರ್ಧನ ಅಪಾರ್ಟ್ ಮೆಂಟ್ನ ಫ್ಲಾಟ್ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಆಭರಣ ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಜ್ಯೋತಿ ಎನ್.ಶೆಣೈ ಎಂಬವರು ತನ್ನ ಪತಿ ನಾರಾಯಣ ಪ್ರಭಾಕರ ಶೆಣೈ ಜೊತೆ ಅ.27ರಂದು ಮುಂಬೈಯಲ್ಲಿರುವ ತನ್ನ ತಂಗಿಯನ್ನು ನೋಡಲು ಫ್ಲಾಟ್ಗೆ ಬೀಗ ಹಾಕಿ ಹೋಗಿದ್ದರು. ಇವರು ನ.10ರಂದು ತಮ್ಮ ಫ್ಲಾಟ್ನಲ್ಲಿ ಕಳವಾಗಿರುವ ಕುರಿತು ಮಾಹಿತಿ ಪಡೆದು ಊರಿಗೆ ಬಂದು ನೋಡಿದಾಗ ಈ ವಿಚಾರ ಬೆಳಕಿಗೆ ಬಂತೆನ್ನಲಾಗಿದೆ.
ಫ್ಲಾಟ್ನ ಮುಖ್ಯದ್ವಾರವನ್ನು ಮುರಿದು ಒಳನುಗ್ಗಿದ ಕಳ್ಳರು, 6 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story