ಸ್ಕೂಟರ್ನಲ್ಲಿಟ್ಟಿದ್ದ ಲಕ್ಷಾಂತರ ರೂ. ಕಳವು
ಮಲ್ಪೆ, ಡಿ.2: ಮಲ್ಪೆ ಬಂದರಿನಲ್ಲಿ ಇಂದು ಬೆಳಗ್ಗೆ ನಿಲ್ಲಿಸಿದ್ದ ಸ್ಕೂಟರ್ನಲ್ಲಿ ಸೀಟಿನಡಿಯಲ್ಲಿ ಇರಿಸಿದ್ದ ಮೀನು ಮಾರಾಟಕ್ಕೆ ಸಂಬಂಧಿಸಿದ ಲಕ್ಷಾಂತರ ರೂ. ಹಣ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಮೀನು ವ್ಯಾಪಾರಿ ಅಬ್ದುಲ್ ರಝಾಕ್ ಎಂಬವರ ಮೀನಿನ ಲಾರಿ ಚಾಲಕ ಸುಲೈಮಾನ್ ಕೇರಳದಲ್ಲಿ ಮೀನು ಮಾರಾಟ ಮಾಡಿದ 3,60,000 ರೂ.ವನ್ನು ಇನ್ನೋರ್ವ ಚಾಲಕ ಮಹಮ್ಮದ್ ಶಮೂನ್ರಲ್ಲಿ ನೀಡಿದ್ದು, ಅದನ್ನು ಅವರು ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಕಟ್ಟಡದಲ್ಲಿರುವ ಮಾಲಕರ ಕಚೇರಿಗೆ ಹೋಗಲು ತನ್ನ ಆಕ್ಟಿವ ಹೋಂಡಾ ಸಿಟಿನ ಅಡಿ ಇಟ್ಟು ಲಾಕ್ ಮಾಡಿದ್ದರು.
ಈ ವೇಳೆ ಕಳ್ಳರು ಸ್ಕೂಟರ್ನ ಸೀಟನ್ನು ಬಲತ್ಕಾರವಾಗಿ ತೆಗೆದು ಅದರಲ್ಲಿದ್ದ 3,60,000 ರೂ.ವನ್ನು ಕಳವು ಮಾಡಿದ್ದಾರೆ. ಶಮೂನ್ ಕಚೇರಿಗೆ ಹೋಗಿ ವಾಪಾಸು ಬಂದು ನೋಡಿದಾಗ ಈ ಕಳವು ಬೆಳಕಿಗೆ ಬಂದಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story