ಮಲ್ಪೆ ಬೀಚ್ನಲ್ಲಿ ಯುವತಿ ಆತ್ಮಹತ್ಯೆ ಯತ್ನ
ಮಲ್ಪೆ, ಡಿ.3: ನಿದ್ರೆ ಮಾತ್ರೆಗಳನ್ನು ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮಲ್ಪೆ ಬೀಚ್ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಬೆಂಗಳೂರು ಶಾಂತಿನಗರದ ಪ್ರೀತಿ(28) ಎಂದು ಗುರುತಿಸಲಾಗಿದೆ. ಕೆಲಸ ಕಳೆದುಕೊಂಡ ಚಿಂತೆಯಲ್ಲಿ ಮನನೊಂದ ಪ್ರೀತಿ ಮಲ್ಪೆ ಬೀಚ್ಗೆ ಆಗಮಿಸಿ, ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರೆನ್ನಲಾಗಿದೆ.
ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡು ಬೀಚ್ನಲ್ಲಿ ಬಿದ್ದುಕೊಂಡಿದ್ದ ಪ್ರೀತಿಯನ್ನು ಬೀಚ್ನಲ್ಲಿರುವ ಜೀವರಕ್ಷಕ ದಳದವರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ದರು. ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಮಲ್ಪೆ ಪೊಲೀಸರು ಆಸ್ಪತ್ರೆಗೆ ತೆರಳಿ ಆಕೆಯನ್ನು ವಿಚಾರಿಸಿದ್ದಾರೆನ್ನ ಲಾಗಿದೆ.
Next Story