ಸಾಲಿಗ್ರಾಮ: ಸಕ್ಕಿಂಗ್ ಯಂತ್ರ ಬಳಸಲು ಸೂಚನೆ
ಉಡುಪಿ, ಡಿ.7: ತಲೆ ಮೇಲೆ ಮಲ ಹೊರುವ ಅನಿಷ್ಠ ಪದ್ಧತಿಯನ್ನು ನ್ಯಾಯಾಲಯ ಮತ್ತು ಸರಕಾರದ ಆದೇಶದಂತೆ ‘ಎಂಪ್ಲಾಯಿಮೆಂಟ್ ಆಫ್ ಮ್ಯಾನ್ವಲ್ ಸ್ಕ್ಯಾವೆಂಜಿಂಗ್ ಕನ್ಸ್ಟ್ರಕ್ಷನ್ ಆಫ್ ಡ್ರೈ ಲ್ಯಾಟ್ರೀನ್ (ಪ್ರಾಹಿಬಿಶನ್) ಆಕ್ಟ್ 1993’ರ ಪ್ರಕಾರ ಮ್ಯಾನುವೆಲ್ ಸ್ಕ್ಯಾವೆಜಿಂಗ್ ಆಚರಣೆಗೆ ಕಾರಣರಾದವರು ಹಾಗೂ ಪದ್ದತಿಯನ್ನು ಮಾಡುತ್ತಿರುವವರು ಅಪರಾಧಿಗಳಾಗುತ್ತಾರೆ.
ಈ ನಿಯಮದಂತೆ ಒಣ ಶೌಚಾಲಯಗಳನ್ನು ಹೊಂದಿರುವುದಾಗಲಿ ತಲೆಯ ಮೇಲೆ ಮಲ ಹೊರುವುದಾಗಲಿ ಹಾಗೂ ಮಲಹೊರುವ ಪದ್ಧತಿಗೆ ಪ್ರಚೋದನೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮುಂದೆ ಶೌಚಾಲಯದ ಗುಂಡಿಗಳನ್ನು ಯಾವುದೇ ವ್ಯಕ್ತಿಗಳು ಸ್ವಚ್ಛ ಮಾಡದೇ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ.
ಅದರಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಸಕ್ಕಿಂಗ್ ಯಂತ್ರ ಲಭ್ಯ ವಿದ್ದು, ಈ ಬಗ್ಗೆ ನಿಗದಿತ ಶುಲ್ಕ ಪಾವತಿಸಿ ಸಕ್ಕಿಂಗ್ ಯಂತ್ರವನ್ನು ಬಳಸಿಕೊಳ್ಳು ವಂತೆ ತಿಳಿಸಲಾಗಿದೆ. ಇನ್ನು ಮುಂದೆ ಶೌಚಾಲಯದ ಗುಂಡಿ ಗಳನ್ನು ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛ ಮಾಡಬೇಕು. ತಪ್ಪಿದಲ್ಲಿ ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.