ಕೋಳಿ ಅಂಕ: ಐವರ ಬಂಧನ
ಕೊಲ್ಲೂರು, ಡಿ.20: ಹೊಸೂರು ಪ್ರೀತಿ ಬಾರ್ ಬಳಿ ಡಿ.19ರಂದು ಸಂಜೆ ಆರು ಗಂಟೆ ಸುಮಾರಿಗೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮಂದಿ ಯನ್ನು ಬಂಧಿಸಿದ್ದಾರೆ.
ಕೆರಾಡಿಯ ಕೃಷ್ಣ ನಾಯ್ಕ(30), ಬೆಳ್ಳಾಲದ ಜಯರಾಮ ಪೂಜಾರಿ(38), ಮುದೂರಿನ ಶೀನ ಪೂಜಾರಿ(45), ಜಡ್ಕಲ್ನ ಶ್ರೀನಿವಾಸ(35), ಗಣಪ ಪುಜಾರಿ (70) ಬಂಧಿತ ಆರೋಪಿಗಳು. ಇವರಿಂದ ಎಂಟು ಕೋಳಿ ಹುಂಜ, ಬಾಳುಕತ್ತಿ 2 ಹಾಗೂ 3,740ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story