ಮೆಡಿಕಲ್ ಶಾಪ್ ನಿಂದ 1.40 ಲಕ್ಷ ರೂ. ಮೌಲ್ಯದ ಸೊತ್ತು ಕಳವು: ದೂರು
ಮಂಗಳೂರು, ಜ.2: ನಗರದ ಸ್ಟೇಟ್ ಬ್ಯಾಂಕ್ನಲ್ಲಿನ ಸೆಂಟ್ರಲ್ ಮೆಡಿಕಲ್ ಶಾಪ್ಗೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ನಗದು ಸೇರಿ ಸಿಸಿ ಕ್ಯಾಮೆರಾ ಡಿವಿಆರ್ ಕಳವುಗೈದ ಘಟನೆ ನಡೆದಿದೆ.
ಜ.1ರ ರಾತ್ರಿ 11:30ರಿಂದ ಜ.2ರಂದು ಬೆಳಗ್ಗೆ 8:15ರೊಳಗೆ ಕಳವು ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ನಗರದ ಸ್ಟೇಟ್ ಬ್ಯಾಂಕ್ನಲ್ಲಿನ ಸೆಂಟ್ರಲ್ ಮೆಡಿಕಲ್ ಶಾಪ್ನ್ನು ದುಷ್ಕರ್ಮಿಗಳು ಹಿಂಬದಿಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಅಂಗಡಿಯ ಒಳಗೆ ಇಟ್ಟಿದ್ದ ಸ್ಟೀಲ್ ಕಪಾಟಿನ ಬಾಗಿಲನ್ನು ಜಖಂಗೊಳಿಸಿ ಅದರಲ್ಲಿದ್ದ ನಗದು, ಮೇಜಿನ ಡ್ರಾವನಲ್ಲಿಟ್ಟದ್ದ ಸುಮಾರು 1,33,000 ನಗದು ಹಾಗೂ ಅಂಗಡಿಗೆ ಅಳವಡಿಸಿದ್ದ ಸುಮಾರು 7,000 ರೂ. ಮೌಲ್ಯದ ಸಿಸಿ ಕ್ಯಾಮೆರಾದ ಡಿವಿಆರ್ನ್ನು ಕಳವುಗೈಯಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,40,000 ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story