ಕಾಪು: ಬದ್ರಿಯಾ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಗೆ ಸನ್ಮಾನ
ಕಾಪು, ಜ. 7: ಬದ್ರಿಯಾ ಜುಮಾ ಮಸೀದಿ ಮಜೂರು-ಮಲ್ಲಾರುವಿನ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಚಂದ್ರನಗರ ಅವರು ಕುಟುಂಬ ಸಮೇತರಾಗಿ ಮಕ್ಕಾ-ಮದೀನ ಯಾತ್ರೆ ಹೋಗುವುದಕ್ಕೆ ಜಮಾಅತ್ ಕಮಿಟಿ ವತಿಯಿಂದ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಸೀದಿಯ ಖತೀಬ್ ಅಬ್ದುರ್ರಶೀದ್ ಸಖಾಫಿ ಅಲ್-ಖಾಮಿಲ್, ಅಧ್ಯಕ್ಷರಾದ ಎಂ.ಎಚ್. ಅಬ್ದುಲ್ ಹಮೀದ್, ಕಾರ್ಯದರ್ಶಿ ಸಂಶುದ್ದೀನ್ ಕರಂದಾಡಿ, ಉಪಾಧ್ಯಕ್ಷ ರಝಾಕ್ ಕೊಪ್ಪಲ್ ತೋಟ, ಕೋಶಾಧಿಕಾರಿ ಪಿ.ಎಂ. ಇಬ್ರಾಹಿಂ, ಶೌಕತ್ತಾಲಿ ಮಲ್ಲಾರು, ಮುಹಮ್ಮದ್ ಕೊಂಬಗುಡ್ಡ, ಹಸನಬ್ಬ ಮಜೂರು, ಎಂ. ಕೆ. ಇಬ್ರಾಹಿಂ, ಶಾಬನ್ ಕೊಪ್ಪಲ್ ತೋಟ, ಹಮೀದ್ ಮಲ್ಲಾರು, ಹಾಜಿ ಮೋನು ಕರಂದಾಡಿ, ಹಮೀದ್ ಚುಕ್ಕುತೋಟ, ಶರ್ಫುದ್ದೀನ್ ಕೊಂಬಗುಡ್ಡೆ, ಉಮ್ಮರ್ ಪೊಲಿಪು, ಇಬ್ರಾಹಿಂ ಐ.ಡಿ.ಎಲ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.
Next Story