ಉಡುಪಿ: ಅಟೋರಿಕ್ಷಾಗಳಿಗೆ ಕಲರ್ಕೋಡಿಂಗ್
ಉಡುಪಿ, ಜ.12: ಜಿಲ್ಲಾ ದಂಡಾಧಿಕಾರಿಗಳ ಅಧಿಸೂಚನೆಯಂತೆ ಉಡುಪಿ ಮತ್ತು ಕುಂದಾಪುರ ತಾಲೂಕು ವ್ಯಾಪ್ತಿಯ ಅಟೋರಿಕ್ಷಾಗಳಿಗೆ ಕಲರ್ ಕೋಡಿಂಗ್ (ವಲಯವಾರು) ನೀಡಲಾಗುತಿದ್ದು, ಈ ಕುರಿತಂತೆ ಅಟೋರಿಕ್ಷಾ ಮಾಲಕರು ಪರವಾನಿಗೆ ಹಾಗೂ ವಾಹನದ ಮೂಲ ದಾಖಲೆಗಳನ್ನು ಹಾಜರು ಪಡಿಸಿ ವಲಯವಾರು ಸ್ಟಿಕ್ಕರ್ನ್ನು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಸಾರಿಗೆ ಸೌಧ, ಮಣಿಪಾಲ ಇಲ್ಲಿಂದ ಜ.14ರಿಂದ ಕಚೇರಿ ಅವಧಿಯಲ್ಲಿ ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಆರ್.ಎಂ. ವರ್ಣೇಕರ್ ಅವರು ತಿಳಿಸಿದ್ದಾರೆ.
Next Story