ಆನ್ಲೈನ್ನಲ್ಲಿ ಹಣ ಪಡೆದು ವಂಚನೆ
ಮಂಗಳೂರು, ಜ.15: ಬೈಕ್ ಮಾರಾಟ ಮಾಡುವುದಾಗಿ ಆನ್ಲೈನ್ನಲ್ಲಿ ಹಣ ಪಡೆದು ಬೈಕ್ ನೀಡದೆ 46,300 ರೂ. ವಂಚನೆ ಮಾಡಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ನಿವಾಸಿ ರಾಘವೇಂದ್ರ ಮೋಸ ಹೋದವರು. ಜ.9ರಂದು ಒಎಲ್ಎಕ್ಸ್ ಆ್ಯಪ್ನಲ್ಲಿ ಬೈಕ್ ಬಗ್ಗೆ ಜಾಹೀರಾತು ನೋಡುತ್ತಿದ್ದ ಸಂದರ್ಭ ಬೈಕ್ ಇಷ್ಟವಾಗಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಆ ವ್ಯಕ್ತಿ ಕರೆ ಸ್ವೀಕರಿಸಿ 50 ಸಾವಿರ ರೂ. ಎಂದು ತಿಳಿಸಿದ್ದು, ಈ ಬಗ್ಗೆ ಮಾತುಕತೆಯಾಗಿ 40 ಸಾವಿರ ರೂ.ಗೆ ದರ ನಿಗದಿಯಾಗಿದೆ. ಬೈಕ್ಗೆ ಸಂಬಂಧಿಸಿ ಫಾರಂ, ಕೊರಿಯರ್ ಮೊದಲಾದ ಕಾರಣ ಹೇಳಿ 46,300 ರೂ. ಹಣವನ್ನು ಆನ್ಲೈನ್ ಮೂಲಕ ಪಡೆದುಕೊಂಡು ಮೋಸ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story