ಬಾಂಬಿಲ: ಮರಳು ತುಂಬಿದ ಲಾರಿ ಪಲ್ಟಿ
ಬಂಟ್ವಾಳ, ಜ. 15: ರಾ.ಹೆ. ಕಾವಳಪಡೂರು ಗ್ರಾಮದ ಬಾಂಬಿಲ ಜಂಕ್ಷನ್ ಬಳಿ ನಿಲ್ಲಿಸಿದ್ದ ಕಾರೊಂದನ್ನು ತಪ್ಪಿಸುವ ಭರದಲ್ಲಿ ಮರಳು ತುಂಬಿದ ಲಾರಿ ರಸ್ತೆಯಲ್ಲಿ ಪಲ್ಟಿಯಾಗಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಮಂಗಳವಾರ ನಡೆಯಿತು.
ದಾವಣಗೆರೆ ತೆರಳುತ್ತಿದ್ದ ಕಾರು ಬಾಂಬಿಲ ಜಂಕ್ಷನ್ ಬಳಿ ಕೆಟ್ಟು ನಿಂತಿತ್ತು ಅತೀ ವೇಗವಾಗಿ ಸಂಚರಿಸುತ್ತಿದ್ದ ಮರಳು ತುಂಬಿದ ಲಾರಿ ಕಾರಿಗೆ ಢಿಕ್ಕಿ ಹೊಡೆಯು ವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ, ಲಾರಿಯಲ್ಲಿದ್ದ ಮರಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿದಲ್ಲದೆ, ವಾಹನ ಸಂಚಾರದಲ್ಲಿ ಸುಮಾರು ಆರ್ಧ ತಾಸುಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ, ಲಾರಿಯನ್ನು ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Next Story