ಜ. 21ರಂದು ಸೂಪರ್ ಮೂನ್: ಭಾರತಕ್ಕೆ ದರ್ಶನ ಭಾಗ್ಯ ಇಲ್ಲ
ಉಡುಪಿ, ಜ. 20: ಜನವರಿ 21ರ ಹುಣ್ಣಿಮೆ ಚಂದ್ರವು ಸೂಪರ್ ಮೂನ್ ಆಗಲಿದ್ದು, ಆದರೆ ಇದು ಅದು ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಯುರೋಪ್ಗಳಲ್ಲಿ ಮಾತ್ರ ಗೊಚರಿಸಲಿದ್ದು ಭಾರತದಲ್ಲಿ ಮಾತ್ರ ಇದರ ದರ್ಶನ ಭಾಗ್ಯ ಇರುವುದಿಲ್ಲ.
ಈ ವರ್ಷದ ಜ.21, ಫೆ.19 ಹಾಗೂ ಮಾ.21ರ ಹುಣ್ಣಿಮೆ ಚಂದ್ರ ಸೂಪರ್ ಮೂನ್ ಆಗಲಿದ್ದು, ಈ ಹುಣ್ಣಿಮೆಗಳಲ್ಲಿ ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 25 ಅಂಶ ಹೆಚ್ಚು ಬೆಳದಿಂಗಳ ಪ್ರಭೆಯಲ್ಲಿ ಗೋಚರಿ ಸಲಿದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಜ.21ರಂದು ಚಂದ್ರ ಭೂಮಿಯಿಂದ ಸುಮಾರು 3,57,715 ಕಿ.ಮೀ. ದೂರದಲ್ಲಿದ್ದು ಸರಾಸರಿ ದೂರ 3,84000 ಕಿ.ಮೀ.ಕ್ಕಿಂತ 27,000 ಕಿ.ಮೀ. ಹತ್ತಿರದಲ್ಲಿ ಸುತ್ತುತ್ತದೆ. ಅದೇ ಫೆ.19ರಂದು ಚಂದ್ರ ಭೂಮಿಯಿಂದ 3,56,846 ಕಿ.ಮೀ., ಹಾಗೆ ಮಾ.21ರಂದು 3,60,772 ಕಿಮೀ ದೂರದಲ್ಲಿ ರುತ್ತದೆ. ಈ ಮೂರೂ ಹುಣ್ಣಿಮೆ ಭವ್ಯ ಬೆಳದಿಂಗಳಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.
Next Story