ವಾಹನ ಢಿಕ್ಕಿ: ಮಹಿಳೆ ಮೃತ್ಯು
ಕಾಪು, ಫೆ.11: ಪಾಂಗಳ ಶ್ರೀದುರ್ಗಾ ವೆಲ್ಡಿಂಗ್ ವರ್ಕ್ಸ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಫೆ.10ರಂದು ರಾತ್ರಿ ವೇಳೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿ ಯಾಗಿದೆ.
ಮೃತರನ್ನು ಉಡುಪಿ ನಗರದ ನಿವಾಸಿ ಮೈಮುನಾ(65) ಎಂದು ಗುರುತಿಸ ಲಾಗಿದೆ. ಕಾಪು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಸ್ ರಸ್ತೆ ದಾಟಲು ನಿಂತಿದ್ದ ಮೈಮುನಾರಿಗೆ ಡಿಕ್ಕಿ ಹೊಡೆಯಿತು. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story