ಹೂಡೆ: ಉಸ್ತಾದ್ ಕುದುರ್ ಅಹ್ಮದ್ ಕಾಝಿ ನಿಧನ
ಉಡುಪಿ, ಫೆ.15: ಹೂಡೆಯ ಜದೀದ್ ಜುಮಾ ಮಸೀದಿಯಲ್ಲಿ ಸುಮಾರು 50 ವರ್ಷಗಳ ಕಾಲ ಇಮಾಮ್ ಮತ್ತು ಖತೀಬ್ ಆಗಿದ್ದ ಉಸ್ತಾದ್ ಕುದುರ್ ಅಹ್ಮದ್ ಕಾಝಿ (85) ಇಂದು ಸಂಜೆ ಅಸೌಖ್ಯದಿಂದ ಹೂಡೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
1958ರಲ್ಲಿ ಸ್ಥಾಪನೆಯಾದ ಹೂಡೆಯ ಮದ್ರಸ ದಾರುಸ್ಸಲಾಮ್ನ ಮುದರ್ರಿಸ್ ಹಾಗೂ 1972ರಿಂದ ಅಂಜುಮನ್ ತಾಲೀಮಾತೆ ಮುಹಮ್ಮದಿಯಾದಲ್ಲಿ ಮುಖ್ಯ ಅಧ್ಯಾಪಕರಾಗಿ 2006ರವರೆಗೆ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಫೆ.16ರಂದು ಬೆಳಗ್ಗೆ 9.30ಕ್ಕೆ ಹೂಡೆಯ ಜದೀದ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ಮೃತರ ಸಹೋದರ ಆದಮ್ ಮೌಲಾನಾ ತಿಳಿಸಿದ್ದಾರೆ.
Next Story