ಬೆಂಗರೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನ ದಿನಾಚರಣೆ
ಮಂಗಳೂರು, ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಗರೆ ಯುನಿಟ್ ವತಿಯಿಂದ ಸಂಸ್ಥಾಪನ ದಿನಾಚರಣೆ ಕಡವಿನ ಬಳಿ ಜಂಕ್ಷನ್ ನಲ್ಲಿ ರವಿವಾರ ಬೆಳಗ್ಗೆ ನಡೆಯಿತು.
ಪಿ.ಎಫ್.ಐ. ಬೆಂಗರೆ ಅಧ್ಯಕ್ಷ ಆಸಿಫ್ ಧ್ವಜಾರೋಹಣ ನೆರವೇರಿಸಿದರು.
ಎಸ್.ಡಿ.ಪಿ.ಐ. ಜಿಲ್ಲಾ ಸಮಿತಿಯ ಸದಸ್ಯ ಮುನೀಬ್ ಬೆಂಗರೆ ಸಂದೇಶ ಭಾಷಣ ಮಾಡಿದರು.
ಎಸ್.ಡಿ.ಪಿ.ಐ. ಮಂಗಳೂರು ದಕ್ಷಿಣ ಕ್ಷೇತ್ರ ಅದ್ಯಕ್ಷ ಸುಹೈಲ್ ಖಾನ್, ಉಪಾಧ್ಯಕ್ಷ ಸಿದ್ದೀಕ್ ಬೆಂಗರೆ, ಯುನಿಟ್ ಅಧ್ಯಕ್ಷ ಸಲೀಂ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭ ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಿಂದ ಹುತಾತ್ಮರಾದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಶಾದಾಬ್ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು.
Next Story