ಮುಂಗಡ ಪತ್ರ ಸಲ್ಲಿಸಲು ವಕ್ಫ್ ಸಂಸ್ಥೆಗಳಿಗೆ ಸೂಚನೆ
ಮಂಗಳೂರು, ಫೆ.18: ದ.ಕ. ಜಿಲ್ಲೆಯ ನೋಂದಾಯಿತ ಎಲ್ಲಾ ವಕ್ಫ್ 2017-18 ನೇ ಸಾಲಿನ ವಾರ್ಷಿಕ ಆಯ-ವ್ಯಯ ಪಟ್ಟಿ ಹಾಗೂ 2019-20ನೇ ಸಾಲಿನ ಮುಂಗಡ ಪತ್ರ (ಬಜೆಟ್)ನ್ನು ನಿಗದಿತ ನಮೂನೆಗಳಲ್ಲಿ ಕಡ್ಡಾಯವಾಗಿ ದ.ಕ.ಜಿಲ್ಲಾ ವಕ್ಫ್ ಕಚೇರಿ, ಮೌಲಾನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಮಂಗಳೂರು ಇಲ್ಲಿಗೆ ಫೆಬ್ರವರಿ 28ರೊಳಗೆ ಸಲ್ಲಿಸಬೇಕು.
ಸಂಬಂಧಪಟ್ಟ ಸಂಸ್ಥೆಗಳ ಪದಾಧಿಕಾರಿಗಳು ನಿಗದಿತ ನಮೂನೆಗಳನ್ನು ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆಯಬಹುದು ಎಂದು ವಕ್ಫ್ ಅಧಿಕಾರಿ ಅಬೂಬಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story