ಸರಕಾರಿ ನೌಕರರ ಸಂಘದ ಚುನಾವಣೆ
ಉಡುಪಿ, ಫೆ.19: ಸರಕಾರಿ ನೌಕರರ ಸಂಘದ 2019-23ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು 2019ನೇ ಸಾಲಿನ ಸದಸ್ಯತ್ವ ಶುಲ್ಕವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಈಗಾಗಲೇ ಎಚ್ಆರ್ಎಂಎಸ್ ಮುಖಾಂತರ ನೇರವಾಗಿ ಸಂಘದ ಬೆಂಗಳೂರು/ಉಡುಪಿ ಖಾತೆಗೆ ಜಮಾ ಮಾಡಿದ ಬಗ್ಗೆ ದಾಖಲೆ ಗಳನ್ನು ತುರ್ತಾಗಿ ಸಂಘದ ಕಛೇರಿಗೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story