ಸೂರಲ್ಪಾಡಿ: ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಗುರುಪುರ: ಕೈಕಂಬ ಸಮೀಪದ ಸೂರಲ್ಪಾಡಿಯಲ್ಲಿ ಈದ್ ಹಬ್ಬದ ನಿಮಿತ್ತ ಸೂರಲ್ಪಾಡಿಯ ಹೆಲ್ಫಿಂಗ್ ಹ್ಯಾಂಡ್ಸ್ ಮತ್ತು ಚ್ಯಾಲೆಂಜರ್ ಫ್ರೆಂಡ್ಸ್ ಸರ್ಕಲ್(ಸಿಎಫ್ಸಿ-ಸೂರಲ್ಪಾಡಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಕ್ಲಬ್ಬಿನ ಆವರಣದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆರ್ ಎಸ್ ಝಾಕಿರ್ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಿಎಫ್ಸಿ ಅಧ್ಯಕ್ಷ ಸಮೀರ್ ಎಸ್ ಎಂ, ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
Next Story