ಪಿಎಫ್ಐ ಬಜ್ಪೆ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ಕಾರ್ಯಕ್ರಮ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ಕಾರ್ಯ ಕ್ರಮವು ಬಜ್ಪೆಯಲ್ಲಿ ರವಿವಾರ ನಡೆಯಿತು.
ಪಿಎಫ್ಐ ಬಜ್ಪೆ ಡಿವಿಜೆನ್ ಅಧ್ಯಕ್ಷ ನವಾಝ್ ಕಾವೂರು ಕ್ರೀಡೆಗೆ ಚಾಲನೆ ನೀಡಿದರು. ಝೋನ್ ಅಧ್ಯಕ್ಷ ಶರೀಫ್ ಬಜ್ಪೆ ಧ್ವಜಾರೋಹಣಗೈದು, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ರೀಡಾ ಕೂಟದಲ್ಲಿ ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಪಿಎಫ್ಐ ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ಮಜೀದ್ ಜೋಕಟ್ಟೆ, ಸಿರಾಜ್ ಕಾವೂರು, ರಫೀಕ್ ಜೋಕಟ್ಟೆ ಹಾಗು ಬಜ್ಪೆ ಡಿವಿಷನ್ ಸದಸ್ಯರು ಭಾಗವಹಿಸಿದ್ದರು.
Next Story