ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ : ಶರಿಯಾ ಕಾಲೇಜುಗಳ ಪ್ರತಿನಿಧಿ ಸಮಾವೇಶ
ಬಂಟ್ವಾಳ: ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಆಶ್ರಯದಲ್ಲಿ ಮಹಿಳಾ ಶರಿಯಾ ಕಾಲೇಜುಗಳ ಪ್ರತಿನಿಧಿ ಸಮಾವೇಶವು ಬಿ.ಸಿ.ರೋಡ್ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ರವಿವಾರ ನಡೆಯಿತು.
ಕುಂಬ್ರ ಮರ್ಕಝುಲ್ ಹುದಾ ಪ್ರಿನ್ಸಿಪಾಲ್ ವಳವೂರು ಮುಹಮ್ಮದ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಉಮರ್ ಸಖಾಫಿ ಎಡಪ್ಪಾಲ್ ಉದ್ಘಾಟಿಸಿದರು. ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ನ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು.
ಈ ಸಂದರ್ಭ ಮಹಿಳಾ ಶರೀಅತ್ ಕಾಲೇಜುಗಳ ಸಿಲೆಬಸ್ ಮತ್ತಿತರ ಕಾರ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಅಂಗೀಕಾರ ಪಡೆದ ಸಂಸ್ಥೆಗಳ ಸಂಪೂರ್ಣ ಶೈಕ್ಷಣಿಕ ಮೇಲ್ವಿಚಾರಣೆ ನಡೆಸಲು ವ್ಯವಸ್ಥೆ ರೂಪಿಸಲಾಯಿತು.
ಅಶ್ರಫ್ ಸಖಾಫಿ ಕಕ್ಕಿಂಜೆ ಸ್ವಾಗತಿಸಿ, ಹನೀಫ್ ಸಖಾಫಿ ಕಿನ್ಯ ವಂದಿಸಿದರು. ರಾಜ್ಯದ 25 ಮಹಿಳಾ ಶಿಕ್ಷಣ ಸಂಸ್ಥೆಗಳ 60 ಮಂದಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story