ಎಂ.ಆರ್.ಬುಕ್ ಸ್ಟಾಲ್ನ ಪುಸ್ತಕ ಮೇಳಕ್ಕೆ ಪೂಕೋಟೂರ್ ಭೇಟಿ
ಮಂಗಳೂರು, ಜೂ.27: ಎಂ.ಆರ್. ಬುಕ್ ಸ್ಟಾಲ್ ಹಮ್ಮಿಕೊಂಡಿರುವ ಪುಸ್ತಕ ಮೇಳಕ್ಕೆ ಸಮಸ್ತ ಎಸ್.ವೈ.ಎಸ್. ಕೇಂದ್ರ ಸಮಿತಿ. ಕಾರ್ಯದರ್ಶಿ, ಹಿರಿಯ ಸಾಹಿತಿ, ಅಂತಾರಾಷ್ಟ್ರೀಯ ಭಾಷಣಗಾರ ಅಬ್ದುಸ್ಸಮದ್ ಪೂಕೋಟೂರ್ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭ ಅವರು ಪುಸ್ತಕ ಮೇಳ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಗೆ ಹೊರತಂದ ಅಲಿಫ್ ವರ್ಕ್ಬುಕ್ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅಬ್ದುಸ್ಸಮದ್ ಪೂಕೋಟೂರ್, ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳಿಗಾಗಿ ಹೊರತಂದಿರುವ ವೈವಿಧ್ಯಮಯ ಪುಸ್ತಕಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ವ್ಯವಸ್ಥಾಪಕರಾದ ಮುಸ್ತಫ ಫೈಝಿ, ರಫೀಕ್ ಅಜ್ಜಾವರ, ಶಾಹುಲ್ ಹಮೀದ್ ಐವರ್ನಾಡು, ಸುಲ್ತಾನ್ ದಾರಿಮಿ, ಸಲೀಂ ಯಮಾನಿ, ಇಕ್ಬಾಲ್ ಅಜ್ಜಿಯಾದ್, ಸಲೀಂ ಫೈಝಿ, ನೌಶಾದ್ ಫೈಝಿ, ಮುಹಮ್ಮದ್ ಮದನಿ, ಜಂಶೀರ್, ಇರ್ಫಾನ್, ಅಲ್ಫಾಝ್ ಬೆಂಗರೆ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಸ್ತಫ ಫೈಝಿ ಸ್ವಾಗತಿಸಿದರು. ರಫೀಕ್ ವಂದಿಸಿದರು.
Next Story